TOWN MUNICIPAL COUNCIL BAILHONGAL ಪುರಸಭೆ ಬೈಲಹೊಂಗಲ

24 Hours HELPLINE for Citizen Service Contact: 08288-237777 ,ಸಹಾಯವಾಣಿ ನಿರಂತರವಾಗಿ ನಿಮ್ಮ ಸೇವೆಯಲ್ಲಿ ಲಭ್ಯವಿದೆ ಸಂಪರ್ಕಿಸಿ : 08288-237777


WELCOME TO THE OFFICIAL WEBSITE OF TOWN MUNICIPAL COUNCIL BAIHLONGAL

ಪುರಸಭೆ ಬೈಲಹೊಂಗಲ ವೆಬ್‌ಸೈಟ್‌ಕ್ಕೆ ಸುಸ್ವಾಗತ

e-governence National Award to Municipal Reforms Cell

                                          

ಬೈಲಹೊಂಗಲ ಪಟ್ಟಣದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿ ಪಡಿಸಲು ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ದಿ ಮತ್ತು ಹಣಕಾಸು ನಿಗಮ ಬೆಂಗಳೂರು ಇವರು WAPCOS ltd ಸಂಸ್ಥೆಗೆ ಯೋಜನೆ ವರದಿಯನ್ನು ತಯಾರಿಸಲು ವಹಿಸಿಕೊಟ್ಟಿರುತ್ತಾರೆ.WAPCOS ltd ಸಂಸ್ಥೆಯು ಈ ಕರಡು ಯೋಜನೆ ಅಂತಿಮವಾಗಿ ತಯಾರಿಸುವ ಪೂರ್ವದಲ್ಲಿ ಪಟ್ಟಣದ ಪ್ರತಿನಿಧಿ,ಹಿರಿಯ ನಾಗರಿಕರು ,ಮಾದ್ಯಮಗಳ ಪ್ರತಿನಿಧಿಗಳು,ವೃತ್ತಿಪರರು ಮುಂತಾದವರೊಂದಿಗೆ ಈ ಯೋಜನೆ ಕುರಿತು ಚರ್ಚಿಸಲು ದಿನಾಂಕ 10-08-2010 ರಂದು ಬೆಳಿಗ್ಗೆ 11:30 ಕ್ಕೆ ಪುರಸಭೆ ಕಾರ್ಯಾಲಯದ ಆವರಣದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷರಾಗಿ ಶ್ರೀ ಯಲ್ಲಪ್ಪ ಬಡ್ಲಿ ಅಧ್ಯಕ್ಷರು ಪುರಸಭೆ ಬೈಲಹೊಂಗಲ ಇವರು ಹಾಗೂ ಮುಖ್ಯ ಅಥಿತಿಗಳಾಗಿ ಸನ್ಮಾನ್ಯ ಶ್ರೀ ಜಗದೀಶ ಮೆಟಗುಡ್‌  ಶಾಶಕರು ಬೈಲಹೊಂಗಲ ಇವರು ಆಗಮಿಸಿದ್ದರು . ವೇದಿಕೆಯ ಮೇಲೆ ಶ್ರೀಮತಿ ಶೋಭಾ ವಾಲಿ ಉಪಾಧ್ಯಕ್ಷರು ಪುರಸಭೆ ಬೈಲಹೊಂಗಲ ,ಶ್ರೀ ಆರ್‌.ಎಸ್‌.ಸುಣಗಾರ ಮುಖ್ಯಾಧಿಕಾರಿ ಪುರಸಭೆ ಬೈಲಹೊಂಗಲ ,ಶ್ರೀ ಹರೀಶ WAPCOS ಅಭಿಯಂತರರು,ಶ್ರೀ ಮೋಹನ ಪ್ರೋಜೇಕ್ಟ ಅಸಿಸ್ಟಂಟ್‌ ಇವರು ಉಪಸ್ತಿತರಿದ್ದರು.

 ಯೋಜನೆಯ ಕಾರ್ಯಾಗಾರ

         

         ಮಾನ್ಯ ಮುಖ್ಯ ಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣ ಅಭಿವೃದ್ಧಿಯೋಜನೆ(CMSMTDP)ಯಡಿ ಟೆಂಡರ ಪ್ರಕಟಣೆ ದಿನಾಂಕ 23/11/2009 

About Bailhongal Town 

 The Town Municipal Council Bailhongal constituted in 1919, It is sitavated at the distance of 42 kms from  Belgaum .Rani kittur channamma, the brave lady's samadhi is at bailhongal, where she was kept  prisoner by the British. A beautiful garden surrounds her tomb.Kittur is  the best known for  the heraic resitance .Rani channamma put up against the british in 1824. Her statue also stands sentriel over belgaum, at a prominent square.

                                                                ಬೈಲಹೊಂಗಲ ನಗರದ ಬಗ್ಗೆ 

ಬೈಲಹೊಂಗಲ ಪಟ್ಟಣವು ಬೆಳಗಾವಿಯಿಂದ 44 ಕಿ.ಮೀ ಅಂತರದಲ್ಲಿದೆ ಬೈಲಹೊಂಗಲ ಪಟ್ಟಣದ ಉಪವಿಭಾಗ ತಾಲ್ಲೂಕು ಸ್ಥಾನವಿದ್ಚದು, ಪಟ್ಟಣದ ಜನಸಂಖ್ಯೆಯು ಸನ್ 2001ರ ಪ್ರಕಾರ 43215 ಇರುತ್ತದೆ. ಇತಿಹಾಸ ಪ್ರಸಿದ್ದವಾದ ಕನ್ನಡ ನಾಡಿನ ವೀರರಾಣಿ ಕಿತ್ತೂರ ಚೆನ್ನಮ್ಮಾಜಿಯವರು ಇಲ್ಲಯೇ ಸ್ವರ್ಗವಾಸಿ ಯಾಗಿದ್ದು, ಅವರ ಸಮಾಧಿಯು ಇಲ್ಲಿಯೇ ಇದೆ. ಪ್ರತಿ ಶುಕ್ರವಾರ ಹಾಗೂ ಸೋಮವಾರ ದಂದು ಸಂತೆ ನಡೆಯುವುದು ಪುರಸಭೆ ವತಿಯಿಂದ 2 ಹೈಸ್ಕೂಲಗಳು ನಡೆಯುತ್ತದೆ. ಅವುಗಳಲ್ಲಿ 1 ಗಂಡು ಹಾಗೂ 1 ಹೆಣ್ಣು ಮಕ್ಕಳ ಸಲುವಾಗಿ ನಡೆಯುತ್ತಿವೆ. ಅಲ್ಲದೆ ಮೂರು ಸಾವಿರ ಮಠದ ವತಿಯಿಂದ 1 ಹೈಸ್ಕೂಲ ಹಾಗೂ 1 ವೃತ್ತಿ ತರಬೇತಿ ಸಂಸ್ಥೆಯನ್ನು ನಡೆಸಲಾಗುತ್ತಿದೆ. ಇದು ಅಲ್ಲದೇ ಕೆ.ಆರ್.ಸಿ.ಇ ಸಂಸ್ಥೆಯವರ ಕಲಾ ವಾಣಿಜ್ಯ ವಿಜ್ಞಾನ ಹಾಗೂ ಕಾನೂನು ಮಹಾ ವಿದ್ಯಾಲಯಗಳನ್ನು ನಡೆಸುತ್ತಿದ್ದಾರೆ. ಇಲ್ಲಿ 25 ಸರಕಾರಿ ಕನ್ನಡ ಪ್ರಾಥಮಿಕ ಶಾಲೆಗಳು ಹಾಗೂ 2 ಪ್ರಾಥಮಿಕ ಉರ್ದು ಶಾಲೆಗಳು ಇವೆ. 1 ಉರ್ದು ಹೈಸ್ಕೂಲ ಸಹ ಇರುತ್ತದೆ. ಅಲ್ಲದೆ 1 ಮಹಿಳಾ ಕಾಲೇಜ ಸಹ ಇದೆ ಹಾಗೂ ಪದವಿ ಪೂರ್ವ ಕಾಲೆಜ 2 ಪದವಿ ಕಾಲೇಜ 1 ಪಾಲಿಟೆಕ್ನಿಕ್‌ 1 ಲಾ ಕಾಲೇಜ್‌ 1 ಇರುತ್ತದೆ. ಬೈಲಹೊಂಗಲ ಪಟ್ಟಣವು ಕೃಷಿ ಪ್ರಧಾನವಾಗಿದೆ. ಇಲ್ಲಿ ಅಕ್ಕಿ, ಜೋಳ, ಗೋವಿನ ಜೋಳ, ಶೇಂಗಾ, ಗೋಧಿ ಹಾಗೂ ಕಬ್ಬು ಇವು ಮುಖ್ಯ ಬೆಳೆಯಾಗಿರುತ್ತವೆ. ಇಲ್ಲಿ ಜಿನ್ನಿಂಗ ಹಾಗೂ ಪ್ರೆಸ್ಸಿಂಗ್ ಹಾಗೂ ಎಣ್ಣೆ ತೆಗೆಯುವ ಕಾರ್ಖಾನೆಗಳು ಸಹ ಇವರುತ್ತವೆ ಇಲ್ಲಿ 4 ಚಲನ ಚಿತ್ರ ಮಂದಿರಗಳು ಮತ್ತು 3 ಉದ್ಯಾನವನಗಳು ಇವೆ.

 "This Website is under Construction"

This page is managed by Shri R.S.Sunagar Chief Officer TMC Bailhongal

The above page is designed and maintained by smt S.B.Pol Junior Programmer TMC Bailhongal, e-mail:itstaff_ulb_bailhongal@yahoo.co.in